• kannada News
  • How To Write A Effective Job Application Letter Know Here In Kannada

ಯಾವುದೇ ಕಂಪನಿಗೆ ನೀಡುವ ನಿಮ್ಮ ಜಾಬ್‌ ಅಪ್ಲಿಕೇಶನ್‌ ಹೇಗಿರಬೇಕು? ಬರೆಯುವುದು ಹೇಗೆ?

ಪ್ರಸ್ತುತದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಉದ್ಯೋಗ ಪಡೆಯಬೇಕು, ಹೆಚ್ಚಿನ ಸ್ಯಾಲರಿ ಪಡೆಯಬೇಕು ಎಂದರೆ ಕೇವಲ ಒಂದು ಕೋರ್ಸ್‌ ಸಾಕಾಗುವುದಿಲ್ಲ. ಬಯಸಿದ ವೃತ್ತಿ ಪಡೆಯಲು ಬೇಕಾದ ಅಗತ್ಯ ಸ್ಕಿಲ್‌ಗಳು ಬೇಕು. ಹಾಗೆಯೇ ಆ ಉದ್ಯೋಗಕ್ಕೆ ಪರಿಣಾಮಕಾರಿಯಾದ ಅರ್ಜಿಯನ್ನು ಬರೆಯಬೇಕು..

how to write a effective job application letter know here in kannada

ಉದ್ಯೋಗ ಅರ್ಜಿ ವಿಧಗಳು

ಉದ್ಯೋಗ ಅರ್ಜಿ ವಿಧಗಳು

ಉದ್ಯೋಗ ಅರ್ಜಿಯಲ್ಲಿ 2 ವಿಧ. ಕವರಿಂಗ್ ಲೆಟರ್ ಮತ್ತು ರೆಸ್ಯೂಮ್. ಉದ್ಯೋಗಕ್ಕೆ ಸೇರಲು ಬಯಸುವವರು ಕೇವಲ ರೆಸ್ಯೂಮ್ ಸಿದ್ಧಪಡಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಆದರೆ ಇದೊಂದೆ ಸಾಲದು. ಜಾಬ್‌ ಅಪ್ಲಿಕೇಶನ್‌ ಲೆಟರ್‌ (ಕವರಿಂಗ್ ಲೆಟರ್) ಅನ್ನು ಸಿದ್ಧತೆ ಮಾಡಿಕೊಂಡು ಹೋಗಬೇಕು. ಇದು ರೆಸ್ಯೂಮ್‌ನಲ್ಲಿರುವ ಮಾಹಿತಿಗಳಿಗಿಂತ ವಿಭಿನ್ನವಾಗಿರಬೇಕು. ಜಾಬ್‌ ಅಪ್ಲಿಕೇಶನ್‌ನಲ್ಲಿ ರೆಸ್ಯೂಮ್ ನ ಸಾರಾಂಶ ಹೇಳಬಹುದು. ಆದರೆ ರೆಸ್ಯೂಮ್ ನಲ್ಲಿ ಇಲ್ಲದ ಹೆಚ್ಚಿನ ಸ್ಕಿಲ್‌ಗಳು, ಎದುರುನೋಡುತ್ತಿರುವ ಉದ್ಯೋಗಕ್ಕೆ ಸಂಬಂಧಪಟ್ಟ ಕೌಶಲ್ಯಗಳು, ಅನುಭವಗಳು, ಸಾಮರ್ಥ್ಯಗಳು, ಸಾಧನೆಗಳು ಮತ್ತು ತರಬೇತಿಗಳನ್ನು ಪಡೆದಿದ್ದರೆ ಈ ಬಗ್ಗೆ ಮಾಹಿತಿ ನೀಡಬಹುದು.

ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಡೆಯಬಹುದಾದ ಇಂಜಿನಿಯರಿಂಗ್ ಜಾಬ್‌ಗಳ ಪಟ್ಟಿ ಇಲ್ಲಿದೆ ನೋಡಿ..

ಯಾರಿಗೆ ಉದ್ಯೋಗ ಅರ್ಜಿ?

ಯಾರಿಗೆ ಉದ್ಯೋಗ ಅರ್ಜಿ?

ಉದ್ಯೋಗ ಅರ್ಜಿಯನ್ನು ಯಾರು ನೇಮಕಾತಿ ಮಾಡುತ್ತಾರೋ ಅವರ ಹೆಸರು ಅಥವಾ ಅವರ ಹುದ್ದೆಯ ಹೆಸರನ್ನು ಬರೆದಿರಬೇಕು. ಆದರೆ ಲೆಟರ್ ಕಲರ್‌ ಪ್ರಿಂಟ್‌ ಆಗಿರಬಾರದು. ಯಾವುದೇ ಹೆಚ್ಚಿನ ಫಾರ್ಮ್ಯಾಟ್‌ ಅನ್ನು ಬಳಸಿರಬಾರದು.

ಇಂಜಿನಿಯರಿಂಗ್ ಓದದೆಯೂ ಪಡೆಯಬಹುದಾದ ಬಹುಬೇಡಿಕೆಯ, ಅಧಿಕ ಸಂಬಳದ ಐಟಿ ಜಾಬ್‌ಗಳಿವು..! ​

ಜಾಬ್ ಅಪ್ಲಿಕೇಶನ್‌ ಹೇಗಿರಬೇಕು?

ಜಾಬ್ ಅಪ್ಲಿಕೇಶನ್‌ ಹೇಗಿರಬೇಕು?

ಉದ್ಯೋಗಕ್ಕಾಗಿ ರಚಿಸುವ ಅಪ್ಲಿಕೇಶನ್ ಸರಳವಾಗಿರಬೇಕು. ಹೇಳುವ ವಿಷಯವನ್ನು ಶಾರ್ಟ್‌ ಆಗಿ ಸಿಂಪಲ್‌ ಆಗಿ ಹೇಳಿರಬೇಕು. ಪಾಯಿಂಟ್‌ವೈಸ್ ಮಾಹಿತಿ ಬರೆದಿರಬೇಕು. ತೀರ ವಾಕ್ಯ ರೂಪದಲ್ಲಿ ಬರೆದಿರಬಾರದು. ಉದ್ಯೋಗ ಬಯಸುವ ಅಭ್ಯರ್ಥಿಯ ಶಿಕ್ಷಣ ಮತ್ತು ವೈಯಕ್ತಿಕ ಸಾಮರ್ಥ್ಯಗಳ ಸಾರಾಂಶ ಜಾಬ್‌ ಅಪ್ಲಿಕೇಶನ್‌ ನಲ್ಲಿ ಇರಬೇಕು. ಅಪ್ಲಿಕೇಶನ್ ನಲ್ಲಿ ನೀಡಲಾದ ಯಾವುದೇ ಮಾಹಿತಿಗಳು ರಿಪೀಟ್ ಆಗದಂತೆ ನೋಡಿಕೊಳ್ಳಬೇಕು. ಹಾಗೆ ಉದ್ಯೋಗ ಪತ್ರವು, ಅರ್ಜಿದಾರನು ತುಂಬಾ ಹತಾಶನಾಗಿರುವುದನ್ನು, ತೋರಿಸುವಂತೆ ಇರಬಾರದು. ಕೇವಲ ಕಂಪನಿಗೆ ತನ್ನ ಟ್ಯಾಲೆಂಟ್‌ ಬಗ್ಗೆ ಮತ್ತು ಉದ್ಯೋಗಕ್ಕೆ ಹೇಗೆ ಅರ್ಹ ಎಂಬುದನ್ನು ಹೇಳುವಂತಿರಬೇಕು.

ಭಾಷೆ ಮತ್ತು ವಾಕ್ಯರಚನೆಗೆ ಹೆಚ್ಚಿನ ಗಮನಹರಿಸಿ

ಭಾಷೆ ಮತ್ತು ವಾಕ್ಯರಚನೆಗೆ ಹೆಚ್ಚಿನ ಗಮನಹರಿಸಿ

ಉದ್ಯೋಗ ಅರ್ಜಿಯಲ್ಲಿ ಬಳಸುವ ಭಾಷೆ / ಪದಗಳು ಮತ್ತು ವಾಕ್ಯರಚನೆಯಲ್ಲಿ ಉದ್ಯೋಗ ಗಿಟ್ಟಿಸುವ ಕಾರಣದಿಂದ ಕೃತಜ್ಞತಾ ಫೀಲ್‌ ನೀಡುವುದು ಬೇಡ. ಬದಲಾಗಿ ವಿನಯಶೀಲವಾಗಿರಲಿ. ಸಾಮಾನ್ಯ ಮಾತಿನ ಶೈಲಿ ಮತ್ತು ತೀರ ತಾಂತ್ರಿಕ ಭಾಷೆ ಎರಡನ್ನು ಬಳಸದಿರಿ. ಅರ್ಜಿ ಸಿದ್ಧಪಡಿಸಿದ ನಂತರ ಎರಡು ಬಾರಿ ಓದಿರಿ. ಆಗ ನಾವು ಹೇಳಲಾದ ಅಂಶಗಳನ್ನು ಒಮ್ಮೆ ಗಮನಿಸಿ. ತಿದ್ದುಪಡಿ ಮಾಡಬೇಕಾದ ಅಂಶಗಳು ನಿಮಗೆ ತಿಳಿಯುತ್ತವೆ. ಹಾಗೂ ಆತ್ಮವಿಶ್ವಾಸ ಇರುವ ಹಾಗೆ ನೋಡಿಕೊಳ್ಳಿ.

ಅರ್ಜಿಯಲ್ಲಿ ಹೇಳಬೇಕಾದ ವಿಷಯಗಳು, ಮಾಡಬಾರದ ತಪ್ಪುಗಳು

ಅರ್ಜಿಯಲ್ಲಿ ಹೇಳಬೇಕಾದ ವಿಷಯಗಳು, ಮಾಡಬಾರದ ತಪ್ಪುಗಳು

ಹವ್ಯಾಸಗಳನ್ನು ನಿಮ್ಮ ಸಿವಿಯಲ್ಲಿ ಬರೆದಿರಬೇಕು. ಕೌಶಲಗಳನ್ನು ಜಾಬ್ ಅಪ್ಲಿಕೇಶನ್‌ನಲ್ಲಿ ಬರೆದಿರಬೇಕು. ಈ ಸೂಚನೆಗಳನ್ನು ಮರೆಯಬಾರದು. ಯಾವ ಉದ್ಯೋಗಕ್ಕಾಗಿ ಅರ್ಜಿ ಹಾಕುತ್ತಿದ್ದೀರೋ ಆ ಹುದ್ದೆಗೆ ಹೇಗೆ ಅರ್ಹ, ಹುದ್ದೆ ನಿರ್ವಹಿಸಲು ಸಾಮರ್ಥ್ಯಗಳು ಮತ್ತು ಅನುಭವಗಳನ್ನು ನಮೂದಿಸಲು ಮರೆಯಬಾರದು. ಒಂದು ಪೇಜ್‌ಗಿಂತ ಹೆಚ್ಚಿನದಾಗಿ ವಿಷಯಗಳು ಇರದಂತೆ ಸರಳವಾಗಿ ಎಲ್ಲವನ್ನು ಹೇಳುವಂತಿರಲಿ. ಜೊತೆಗೆ ಅಪ್ಲಿಕೇಶನ್‌ ಲೆಟರ್‌ನಲ್ಲಿ ಟೈಪಿಂಗ್, ವ್ಯಾಕರಣ, ವಾಕ್ಯರಚನೆ ಮಿಸ್‌ಟೇಕ್‌ಗಳು ಇರದಂತೆ ನೋಡಿಕೊಳ್ಳಿ.

ಬೆಂಗಳೂರು ಬಿಇಎಂಎಲ್‌ನಲ್ಲಿ BE ಪಾಸಾದವರಿಗೆ ಉದ್ಯೋಗ: ವೇತನ ಶ್ರೇಣಿ Rs.60000-300000 ವರೆಗೆ.

ಸ್ಯಾಂಪಲ್‌ ಅರ್ಜಿಗಳನ್ನು ನೋಡಿಕೊಳ್ಳಿ

ಸ್ಯಾಂಪಲ್‌ ಅರ್ಜಿಗಳನ್ನು ನೋಡಿಕೊಳ್ಳಿ

ಅರ್ಜಿ ಬರೆಯುವುದು ಹೇಗೆ ಎಂದು ತಿಳಿದಿದ್ದಲ್ಲಿ, ಗೂಗಲ್‌ ನಲ್ಲಿ ಜಾಬ್ ಅಪ್ಲಿಕೇಶನ್‌ ಸ್ಯಾಂಪಲ್‌ ಟೆಂಪ್ಲೇಟ್‌ ಗಳನ್ನು ಹುಡುಕಿ ರೆಫರ್ ಮಾಡಿ. ನೀವು ಬಯಸುವ ಉದ್ಯೋಗಕ್ಕೆ, ಅರ್ಜಿ ಹಾಕಲು ಬಯಸುವ ಕಂಪನಿಗೆ ತಕ್ಕಂತೆ ಯಾವುದು ಸೂಕ್ತ ಎನಿಸುತ್ತದೋ ಆ ಟೆಂಪ್ಲೇಟ್ ವಿನ್ಯಾಸದಲ್ಲಿ ಜಾಬ್ ಅಪ್ಲಿಕೇಶನ್ ರಚಿಸಿ.

ಈ ತಪ್ಪುಗಳು ಉದ್ಯೋಗ ಅರ್ಜಿಯಲ್ಲಿ ಇರಬಾರದು

 ಈ ತಪ್ಪುಗಳು ಉದ್ಯೋಗ ಅರ್ಜಿಯಲ್ಲಿ ಇರಬಾರದು

  • ಸಂಕೀರ್ಣವಾದ ವಾಕ್ಯರಚನೆ.
  • ಸ್ಕಿಲ್‌ಗಳನ್ನು ವಿವರಿಸಲು ಸಹ ಪದಗಳ ಬಳಕೆ ಸರಳ ಮತ್ತು ಸುಲಭವಾಗಿರಬೇಕು.
  • ದೀರ್ಘವಾಕ್ಯಗಳಲ್ಲಿ ಏನನ್ನು ಹೇಳಿರಬಾರದು.
  • ಹವ್ಯಾಸಗಳು ಮತ್ತು ಆಸಕ್ತಿಗಳು ಅಗತ್ಯವಿಲ್ಲ. ಇವುಗಳನ್ನು ಬರೆಯಬಾರದು.
  • ಪ್ಲೀಸ್ - ರೆಸ್ಯೂಮ್‌ ಅನ್ನು ಒಮ್ಮೆ ನೋಡಿ ಎಂದು ಹೇಳುವ ರೀತಿಯಲ್ಲಿ ಯಾವುದೇ ಮನವಿ ಮಾಡಬೇಡಿ.
  • ಒಮ್ಮೆ ಹೇಳಿದ ಮಾಹಿತಿ ಮತ್ತೊಮ್ಮೆ ಪುನರಾವರ್ತಿಸಬಾರದು.

ಸುನೀಲ್ ಬಿ ಎನ್

ಓದಲೇ ಬೇಕಾದ ಸುದ್ದಿ

Bigg Boss ಮನೆಯಲ್ಲಿ ಒಂಬತ್ತನೇ ಅದ್ಭುತ: ಮತ್ತೆ ಒಂದಾದ ಮಂಜಣ್ಣ - ತ್ರಿವಿಕ್ರಮ್, ಈ ಬಾರಿ ಹೊಸ ಒಪ್ಪಂದ!

ಮುಂದಿನ ಲೇಖನ

ಸರ್ಕಾರಿ ನೌಕರಿ ಪಡೆಯಲು ಯಾವ ಐಟಿಐ ಕೋರ್ಸ್‌ ಆಯ್ಕೆ  ಮಾಡಿದ್ರೆ ಒಳ್ಳೆಯದು ಗೊತ್ತೇ?

IMAGES

  1. letter for application|kannada letter writing|application|teacher job application|kannada|letter

    teacher job application letter in kannada

  2. Kannada Formal Letter Writing Format : Official Letter Writing In

    teacher job application letter in kannada

  3. Vyavaharika Patra

    teacher job application letter in kannada

  4. Job Application Letter For Primary School Teacher

    teacher job application letter in kannada

  5. Letter writing about application for teacher post in kannada

    teacher job application letter in kannada

  6. Kannada Letter Writing Format For Principal / Kannada Letter Writing

    teacher job application letter in kannada

VIDEO

  1. How To Write Job Application for Teacher

  2. 20000 Teachers Recruitment: ★ 15,000 (13,500) GPSTR ಮತ್ತೇ 20,000 ಶಿಕ್ಷಕರ ನೇಮಕಕ್ಕೆ ಹೊಸ ಪ್ರಸ್ತಾವನೆ.!!

  3. ರಜಾ ಅರ್ಜಿ/ರಜೆ ಕೋರಿ/ರಜೆ ಮನ್ನಿಸಿ ಎರಡೂ ವಿಧಾನದಲ್ಲೂ ರಜಾ ಅರ್ಜಿ/Leave letter in kannada/ರಜೆ ಪತ್ರ#Newworld#

  4. ಶೈಕ್ಷಣಿಕ ಪ್ರವಾಸಕ್ಕೆ 2000 ಕಳುಹಿಸುವಂತೆ ತಂದೆಗೆ ಪತ್ರ Kannada letter writing

  5. Leave letter writing model

  6. Job Application Class 12th || Job Application Letter Or Format || Resume Format || Letter Writing